Tuesday, June 2, 2009

ಅಭಯಾಕ್ಷರ !!


ಅ, ಆ ಬರೆಯುವ ಬಗೆಯನ್ನು ಒಮ್ಮೆ ತೋರಿಸಿದಾಗ ತನ್ನ ಮನ ಬಂದಲ್ಲಿ ಮನಬಂದಂತೆ ಬರೆಯಲು ಆರಂಭಿಸಿಯೇ ಬಿಟ್ಟ. ಮನೆಯ ಗೋಡೆ, ನೆಲ, ಕೈಗೆ ಸಿಕ್ಕ ಪೇಪರ‍್ ಎಲ್ಲಿ ನೋಡಿದಲ್ಲಿ ಆತನ ಅ,ಆ.... ಗಳೇ

ಹೇಗಿದೆ ನನ್ನ ಡ್ರೆಸ್



ಹೊಸ ಡ್ರೆಸ್ ಹಾಕಿದ ತಕ್ಷಣ ಕ್ಯಾಮೆರಾ ಮುಂದೆ ರೆಡಿಯಾಗುತ್ತಾನೆ. ಅಭಯನ ರಶ್ಮಿ ದೊಡ್ಡಮ್ಮ ಸೆಲೆಕ್ಟ್ ಮಾಡಿದ ಬಟ್ಟೆ ಹಾಗೂ ಅವರೇ ಆಸಕ್ತಿಯಿಂದ ಕಸೂತಿ ಕೆಲಸ ಮಾಡಿದ ಈ ಡ್ರೆಸ್ ಚೆನ್ನಾಗಿ ಸೂಟ್ ಆಗುತ್ತೆ ಅಲ್ಲವೇ

ಅಭಯ್ ಗೆ ಈ ಸ್ವೆಟರ‍್ ಕಂಡರೆ ತುಂಬ ಪ್ರೀತಿ. ಅವನ ಮಹೇಶ್ ಮಾಮ ಕೊಡಿಸಿದ್ದಕ್ಕೋ ಅಥವಾ ತುಂಬ ಡಿಫೆರೆಂಟ್ ಆಗಿ ಕಾಣುವುದಕ್ಕೋ ಗೊತ್ತಿಲ್ಲ. ಈಗ ಅವನಿಗೆ ಚಿಕ್ಕದಾದರೂ ಅದನ್ನು ಹಾಕಿಕೊಂಡು ಓಡಾಡ್ತಾ ಇರುತ್ತಾನೆ.

Sunday, May 31, 2009


ಹೇಗಿದೆ ಸ್ಮೈಲ್ & ಸ್ಟೈಲ್ !!!!!!!!!!
ಅಭಯ್‌ನ ೫ ನೇ ಹುಟ್ಟುಹಬ್ಬದ ದಿನ ಕ್ಯಾಮೆರಾಕ್ಕೆ ಪೋಸ್ ನೀಡಿದ ಬಗೆ ಇದು. ಕೈಯಲ್ಲಿರುವ ಉಂಗುರಗಳ ಪ್ರದರ್ಶನವೋ ತುಂಟ ನಗೆಯ ನೋಟವೋ ನೀವೇ ನಿರ್ಧರಿಸಿ.

Saturday, May 23, 2009



ಅಭಯನ ಶಿಶುಮಂದಿರಕ್ಕೆ ಹೊಸದಾಗಿ ಬಂದ ಆಟದ ಸಾಮಗ್ರಿಗಳು. ತನ್ನ ಗೆಳತಿಯರ ಜೊತೆ ಆಟದಲ್ಲಿ ತಲ್ಲೀನ!
ಚೆಲುವು ನೋಡಮ್ಮ ಚೆಲುವು ನಮ್ಮ ಅಭಯ ಕೃಷ್ಣ ಜೋಶಿಯ ಚೆಲುವು !!!!

ಕೃಷ್ಣ ಜನ್ಮಾಷ್ಟಮಿಯಂದು ಬಾಲಕೃಷ್ಣನ ವೇಷದಲ್ಲಿ ಶಿಶುಮಂದಿರದ ಮೆರವಣಿಗೆಗೆ ಹೊರಟಿದ್ದಾನೆ. ರಥವೆಲ್ಲಿ ? ಎನ್ನಬೇಡಿ. ಬೈಕ್ ಮೇಲೆ ಸಂಜು ಜೊತೆಗೆ ಉತ್ಸಾಹದಿಂದ ಫೋಟೊಗೆ ಪೋಸ್ ಕೊಡುತ್ತಿದ್ದಾನೆ ಅಲ್ಲವೇ ?

ಬಿಲ್ಲುಗಾರ-ಬೇಟೆಗಾರ !!


ಒಮ್ಮೆ ಆಟದ ಬಿಲ್ಲು ಬಾಣ ತಂದು ಕೊಟ್ಟಾಗ ಅಭಯನಿಗೆ ತುಂಬಾ ಸಂತೋಷ ! ಇಡೀ ದಿನ ಅದರ ಜೊತೆಯೇ ಆಟ. ಎಲ್ಲರಿಗೂ ಗುರಿಯಿಟ್ಟು ಬಾಣ ಬಿಡುವ ಚಪಲ. ಬಿಲ್ಲು ಬಾಣಗಳು ಹಾಳಾಗುವವರೆಗೂ ಬಿಡದೇ ಅದರ ಜೊತೆಗೇ ಅವನ ಆಟ !!!