Wednesday, January 28, 2015

ಅಭಯನ ಉಪನಯನ ಕಾರ್ಯಕ್ರಮದ ಸಂದರ್ಭ

ಷೋಡಶ ಸಂಸ್ಕಾರಗಳಲ್ಲಿ ಪ್ರಮುಖವಾದ ಉಪನಯನ ಸಂಸ್ಕಾರದ ಕಾರ್ಯಕ್ರಮದ ಸಂದರ್ಭದಲ್ಲಿನ ಒಂದು ಮುಗುಳ್ನಗೆ....
ಶುಭ ಕಾರ್ಯಗಳ ಪ್ರಾರಂಭದಲ್ಲಿ ಮನೆಯ ಮುಂದೆ ತಳಿರು ತೋರಣಗಳ ಹಂದರದ ಸಿದ್ಧತೆ ಹಾಗೂ ಪೂಜಾ ವಿಧಿಗಳಲ್ಲಿ ಉತ್ಸಾಹ-ಸಂಭ್ರಮದಲ್ಲಿ ಪಾಲ್ಗೊಂಡಿರುವ ಅಭಯ್, ಆತನ ತಂದೆ ಕೃಷ್ಣ ಜೋಶಿ, ತಾಯಿ ವೀಣಾ ಜೋಶಿ, ಕಳಸಗಿತ್ತಿಯ ಪಾತ್ರದಲ್ಲಿ ನಿಹಾರಿಕಾ.....
 ಶುಭ ಸಮಾರಂಭಗಳ ಕಡ್ಡಾಯ ವಿಧಿ - ಶುಭ-ಪವಿತ್ರ ಸಂಕೇತವಾದ ಅರಿಶಿಣದ ಲೇಪನ.... ಅಭಯನ ಅತ್ತೆ... ಕಲ್ಪನಾ
 ಅರಿಶಿನದ ಚಿತ್ತಾರ ಮುಖ, ಮೈ ಮನಗಳಿಗೆಲ್ಲ.... ದೊಡ್ಡಮ್ಮ ರಶ್ಮಿ... ಮಾವಶಿ ಜಯಶ್ರೀ ಇವರೆಲ್ಲರಿಂದ
ಅರಿಶಿನದ ಲೇಪನದೊಂದಿಗೆ ಕಂಗೊಳಿಸುತ್ತಿರುವ ಅಭಯ್ ಹಾಗೂ ಇತರರು.....
 ಎಲ್ಲ ಮುತ್ತೈದೆಯರಿಂದ ಪವಿತ್ರ ಜಲದ ಸ್ನಾನ... ಹಂದರದಲ್ಲಿ..... ಸುರಗಿಯ ನೀರಿನ ಸ್ನಾನ....
 ನಾಂದಿ ಸ್ಥಾಪನೆಯ ಧಾರ್ಮಿಕ ಕಾರ್ಯಕ್ರಮದ ವಿಧಿಗಳಲ್ಲಿ ತನ್ಮಯನಾಗಿರುವ ಅಭಯ್......
 ನಾಂದಿ ಸ್ಥಾಪನೆಯ ಸಂದರ್ಭದ ಒಂದು ಕ್ಷಣ....
ಉಪನಯನ ದೀಕ್ಷೆಗೆ ಸಿದ್ಧನಾಗಿರುವ ಬಾಲ ವಟು.... ಅಭಯ್.......