ಒಮ್ಮೆ ಆಟದ ಬಿಲ್ಲು ಬಾಣ ತಂದು ಕೊಟ್ಟಾಗ ಅಭಯನಿಗೆ ತುಂಬಾ ಸಂತೋಷ ! ಇಡೀ ದಿನ ಅದರ ಜೊತೆಯೇ ಆಟ. ಎಲ್ಲರಿಗೂ ಗುರಿಯಿಟ್ಟು ಬಾಣ ಬಿಡುವ ಚಪಲ. ಬಿಲ್ಲು ಬಾಣಗಳು ಹಾಳಾಗುವವರೆಗೂ ಬಿಡದೇ ಅದರ ಜೊತೆಗೇ ಅವನ ಆಟ !!!
Tuesday, November 25, 2008
ಅಭಯನ ಚಟುವಟಿಕೆಗಳೂ ನಿರಂತರವೇ. ನಿದ್ದೆಯಲ್ಲಿ ಮಾತ್ರ ಆತ ನಿಶ್ಶಬ್ದ.
ದೀರ್ಘ ಕಾಲ ಆಯಾಸವಿಲ್ಲದೇ ಚಟುವಟಿಕೆಯಲ್ಲಿರಬಲ್ಲ. ಇತ್ತೀಚೆಗೆ ನಾವೆಲ್ಲ ವಿಜಾಪೂರದ ಗೋಲಗುಮ್ಮಟವನ್ನು ನೋಡಲು ಹೋದಾಗ ದೊಡ್ಡವರಿಗಿಂತ ವೇಗವಾಗಿ ಬೇಗನೇ ಏರಿಳಿದು ಕುಳಿತುಬಿಟ್ಟ. ಉಳಿದವರೆಲ್ಲಾ ಉಸ್ಸಪ್ಪಾ ಎನ್ನುತ್ತಿದ್ದರೆ ಈತ ಮಾತ್ರ ಜಪ್ಪೆನ್ನಲಿಲ್ಲ.!
ಹಾಂ! ಇತ್ತೀಚೆಗೆ ದೇವರು ಧ್ಯಾನದ ಬಗ್ಗೆಯೂ ಕುತೂಹಲ ಅಭಯನಿಗೆ.
ಓಂ ನಮಃ ಶಿವಾಯ ! ಜಪ ಮಾಡು ಎಂದರೆ ಮಾಡ್ತಾ ಕೂತುಬಿಡ್ತಾನೆ. ಮೊನ್ನೆ ಗಾಯತ್ರಿ ಮಹಾ ಯಜ್ಞದಲ್ಲಿ ತುಂಬಾ ಓಡಾಡಿ ಅಲ್ಲಿ ಹೇಳಿದ ಗಾಯತ್ರಿ ಮಂತ್ರವೂ ಆತನಿಗೆ ಈಗಲೇ ಹೃದ್ಗತವಾಗಿದೆ!
ಅಭಯನಿಗೆ ಮೋಟಾರ್ ಬೈಕ್ ಕಂಡರೆ ತುಂಬ ಪ್ರೀತಿ. ತಾನೇ ಹತ್ತಿ ಸ್ಟಾರ್ಟ್ ಮಾಡಿ ಓಡಿಸಬೇಕೆಂಬ ಹಂಬಲವೂ ಕೂಡ.
ಅಭಯ್ ಗೆ ಕಂಪ್ಯೂಟರ್ ಎಂದರೆ ತುಂಬ ಪ್ರೀತಿ. ಅದರ ಬಗೆಗೆ ಎಲ್ಲವನ್ನೂ ಕುತೂಹಲದಿಂದ ನೋಡಿ ಕೇಳಿ ತಿಳಿದುಕೊಳ್ಳುವ ಹಂಬಲ. ಒಮ್ಮೆ ಕೇಳಿದ್ದನ್ನು ಮತ್ತೆ ಮತ್ತೆ ಬಳಸಿ ಮನನ ಮಾಡಿಕೊಳ್ಳುವ ಸ್ವಾಭಾವಿಕ ಹುಡುಗುತನ!. ಕಂಪ್ಯೂಟರ್ ಟರ್ಮಿನಾಲಜಿಯ ಆತನ ಜ್ಞಾನ ಕೆಲ ಹಿರಿಯರನ್ನು ಅಚ್ಚರಿಗೊಳಿಸಿದ್ದೂ ಉಂಟು. ಹಾಂ. ಕಳೆದ ತಿಂಗಳು ತಾನೇ ತನ್ನ ೫ ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಭಯ್ ಇಲ್ಲಿ ನಿಮ್ಮ ಮುಂದೆ.......