Tuesday, June 2, 2009

ಅಭಯಾಕ್ಷರ !!


ಅ, ಆ ಬರೆಯುವ ಬಗೆಯನ್ನು ಒಮ್ಮೆ ತೋರಿಸಿದಾಗ ತನ್ನ ಮನ ಬಂದಲ್ಲಿ ಮನಬಂದಂತೆ ಬರೆಯಲು ಆರಂಭಿಸಿಯೇ ಬಿಟ್ಟ. ಮನೆಯ ಗೋಡೆ, ನೆಲ, ಕೈಗೆ ಸಿಕ್ಕ ಪೇಪರ‍್ ಎಲ್ಲಿ ನೋಡಿದಲ್ಲಿ ಆತನ ಅ,ಆ.... ಗಳೇ

ಹೇಗಿದೆ ನನ್ನ ಡ್ರೆಸ್ಹೊಸ ಡ್ರೆಸ್ ಹಾಕಿದ ತಕ್ಷಣ ಕ್ಯಾಮೆರಾ ಮುಂದೆ ರೆಡಿಯಾಗುತ್ತಾನೆ. ಅಭಯನ ರಶ್ಮಿ ದೊಡ್ಡಮ್ಮ ಸೆಲೆಕ್ಟ್ ಮಾಡಿದ ಬಟ್ಟೆ ಹಾಗೂ ಅವರೇ ಆಸಕ್ತಿಯಿಂದ ಕಸೂತಿ ಕೆಲಸ ಮಾಡಿದ ಈ ಡ್ರೆಸ್ ಚೆನ್ನಾಗಿ ಸೂಟ್ ಆಗುತ್ತೆ ಅಲ್ಲವೇ

ಅಭಯ್ ಗೆ ಈ ಸ್ವೆಟರ‍್ ಕಂಡರೆ ತುಂಬ ಪ್ರೀತಿ. ಅವನ ಮಹೇಶ್ ಮಾಮ ಕೊಡಿಸಿದ್ದಕ್ಕೋ ಅಥವಾ ತುಂಬ ಡಿಫೆರೆಂಟ್ ಆಗಿ ಕಾಣುವುದಕ್ಕೋ ಗೊತ್ತಿಲ್ಲ. ಈಗ ಅವನಿಗೆ ಚಿಕ್ಕದಾದರೂ ಅದನ್ನು ಹಾಕಿಕೊಂಡು ಓಡಾಡ್ತಾ ಇರುತ್ತಾನೆ.